ಪೂರ್ವಾಹ್ನ 10.30ಕ್ಕೆ ಸರಿಯಾಗಿ ಶಾಲಾ ಸಭಾಂಗಣದಲ್ಲಿ ಮುಖ್ಯ ಶಿಕ್ಷಕಿ, ಸಹ ಶಿಕ್ಷಕರು ಹಾಗೂ ವಿದ್ಯಾರ್ಥಿವೃಂದ ಒಟ್ಟು ಸೇರಿದೆವು. ಐದನೆ ತರಗತಿ ವಿದ್ಯಾರ್ಥಿಗಳು ಶಾಂತಿ ಪ್ರಾರ್ಥನೆಯನ್ನು ನೃತ್ಯ ಮುಖೇನ ಮಾಡಿದರು. ಏಳನೆ ತರಗತಿ ವಿದ್ಯಾರ್ಥಿ ಮಂಜುಳರವರು “ಹುತಾತ್ಮ ದಿನದ” ಮಾಹಿತಿ ಹಾಗೂ ವಿಚಾರಗಳನ್ನು ತಿಳಿಸಿದರು. ರುಚಿತಾ ಮತ್ತು ತಂಡದವರಿಂದ ಶಾಂತಿ ನೃತ್ಯ ನಡೆಸಲಾಯಿತು.

 

 

 

 

ಸಹಶಿಕ್ಷಕಿ ಕುಮಾರಿ ಲುವಿಜಾ ಮೆಟಿಲ್ಡಾ ಮಾರ್ಟಿಸ್‍ರವರು “ಸಾಮಾನ್ಯ ಜನರು ಸಮಸ್ಯೆಯನ್ನು ನೀಡಬೇಡಿ ದೇವಾ”ಎಂದರೆ ಅಸಾಮಾನ್ಯರು ಬಂದ ಸಮಸ್ಯೆಗಳಿಗೆ ಪರಿಹಾರ ಹುಡುಕುವಂತೆ ಮಾಡಿ ದೇವಾ” ಎನ್ನುತ್ತಾರೆ. ನಾವೆಲ್ಲರೂ ಎರಡನೆ ವರ್ಗದ ಜನರಾಗೋಣ ಎಂದು ತಿಳಿಸಿದರು. ಶಾಂತಿಯ ಬಗ್ಗೆ ತಿಳಿಸಿ ಪಾರಿವಾಳ ಶಾಂತಿಯ ಪಕ್ಷಿ ಎಂಬುದನ್ನು ತಿಳಿಸಿದರು. ಪ್ರಾಮಾಣಿಕತೆ, ಶಿಸ್ತು ಇದರೊಂದಿಗೆ ಶಾಂತಿ ಸೇರಿದರೆ ನಾವೆಲ್ಲರೂ ಶಾಂತಿ ಪ್ರಿಯರಾಗುತ್ತೇವೆ ಎಂದು ಕಿವಿ ಮಾತನ್ನು ಹೇಳಿದರು. ಮುಖ್ಯ ಶಿಕ್ಷಕಿ ಭಗಿನಿ ಪ್ರೇಮಿಕಾರವರು ಶಾಂತಿ ಸಂದೇಶವನ್ನು “ದೇವರ ವಾರ್ತೆ”ಯೊಂದಿಗೆ ಕಷ್ಟ, ಸಂಕಷ್ಟ ತಪ್ಪದ್ದಲ್ಲ ಆದರೆ ನಾವು ಧೈರ್ಯವಾಗಿರಬೇಕು. ನಾವು ಲೋಕವನ್ನು ಶಾಂತಿಯೆಡೆಗೆ ಮುನ್ನಡೆಸಲು ಪ್ರಯತ್ನ ಪಡಬೇಕೆಂಬ ಸಂದೇಶ ನೀಡಿದರು. ಸರಿಯಾಗಿ 11.00 ಗಂಟೆಗೆ ಮೌನಪ್ರಾರ್ಥನೆ ಮಾಡಿದೆವು. ನಂತರ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

ಸ್ಥಳ : ಜ್ಯೋತಿನಗರ
ದಿನಾಂಕ : 26-01-2018

 

Comments powered by CComment

Home | About | Sitemap| Contact

Copyright ©2017 www.ackarnatakaprovince.org. Powered by eCreators

Contact Us

AC Provincial House
St. Ann's Convent
Mangalore
575001

Phone: 0824 -2425286, 2441084