ದಿ. 01, 2017: ಸೈಂಟ್ ಸಿಸಲೀಸ್ ಹಿ. ಪ್ರಾ. ಶಾಲಾ ಕ್ರೀಡೋತ್ಸವವು ದಿನಾಂಕ 21-11-2017 ರಂದು ಆಟದ ಮೈದಾನದಲ್ಲಿ ನೆರವೇರಿತು. ಪೂರ್ವಾಹ್ನ 9.15 ಗಂಟೆಗೆ ಸಭೆಯ ಮುಖ್ಯ ಅತಿಥಿಯವರಾದ ಶ್ರೀಯುತ ಸಂದೀಪ್ ಕುಮಾರ್ ಗೌರವ ರಕ್ಷೆಯನ್ನು ಸ್ವೀಕರಿಸಿದರು. ವೇದಿಕೆಯಲ್ಲಿರುವ ಗಣ್ಯರನ್ನು ಮುಖ್ಯ ಶಿಕ್ಷಕರು ಸ್ವಾಗತಿಸಿದರು. ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆಯವರಾದ ಶ್ರೀಮತಿ ವಂದನಾರವರು ದೀಪ ಬೆಳಗಿಸಿ ಕ್ರೀಡೋತ್ಸವವನ್ನು ಉದ್ಘಾಟಿಸಿದರು. ವಿದ್ಯಾರ್ಥಿಗಳು ಪ್ರಾರ್ಥನೆಯನ್ನು ನೆರವೇರಿಸಿದರು. ಕ್ರೀಡೋತ್ಸವದ ಧ್ವಜವನ್ನು ಸಮಾರಂಭದ ಅಧ್ಯಕ್ಷರಾದ ಸಿಸ್ಟರ್ ಮೇಝಿಯವರು ಧ್ವಜಾರೋಹಣ ಗೈದರು. ಮೂರನೇ ತರಗತಿಯ ಸ್ರಜನ್ ಕ್ರೀಡಾಜ್ಯೋತಿಯನ್ನು ಸಭಾಂಗಣಕ್ಕೆ ತಂದು ಮುಖ್ಯ ಅತಿಥಿಯವರು ಕ್ರೀಡೆಯನ್ನು ಉದ್ಘಾಟಿಸಿದರು. ತದನಂತರ ದಿನೇಶ್ ಸರ್ ರವರು ತಂಡದ ಪರಿಚಯವನ್ನು ಅತಿಥಿಗಳಿಗೆ ನೀಡಿದರು.

 

 

 

 

 

 

 

 

 

 

 

ನಾಲ್ಕನೇ ತರಗತಿಯ ತನುಶ್ರೀ ಒಂದು ನಿಮಿಷಕ್ಕೆ 19 ಸಲ ನಿರಲಾಂಭ ಪೂರ್ಣ ಚಕ್ರಾಸನವನ್ನು ಮಾಡಿ ತೋರಿದ ಪ್ರತಿಭೆ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ನೋಂದಾಯಿಸಲ್ಪಟ್ಟ ಸಂದರ್ಭದಲ್ಲಿ ಶಾಲಾ ವತಿಯಿಂದ ಅಧ್ಯಕ್ಷರು ಶಾಲು ಹೊದಿಸಿ ಸನ್ಮಾನಿಸಿದರು. ಶ್ರೀ ದಿನೇಶ್ ಕುಮಾರ್ ರವರು ಈ ಕ್ರೀಡಾಕೂಟದ ಯಶಸ್ಸಿಗೆ ಕಾರಣರಾದ ಎಲ್ಲರನ್ನು ವಂದಿಸಿದರು. ಕುಮಾರಿ ಯಶಸ್ಸಿನಿ ಕಾರ್ಯಕ್ರಮವನ್ನು ನಿರೂಪಿಸಿದಳು. ಎಲ್ಲರೂ ವಿದ್ಯಾರ್ಥಿಗಳ ಸಾಮೂಹಿಕ ಕವಾಯತುಗಳನ್ನು ವೀಕ್ಷಿಸಿ ಆನಂದಿಸಿದರು. ಇಡೀ ದಿನ ವಿದ್ಯಾರ್ಥಿಗಳು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ಸಂತೋಷದಿಂದ ಕಳೆದರು.

 

Comments powered by CComment

Home | About | Sitemap| Contact

Copyright ©2017 www.ackarnatakaprovince.org. Powered by eCreators

Contact Us

AC Provincial House
St. Ann's Convent
Mangalore
575001

Phone: 0824 -2425286, 2441084